Jana Gana
ಜನಗಣ ವಂದೇ ಮಾತರಂ
ಜೋಡಿಸಿ ಕೈಯನು
ದೇಶದ ಸಂರಕ್ಷಣೆ
ನಮ್ಮ ನಿಮ್ಮ ಹೊಣೆ
ಕಣ್ಣಿಗೆ ಕಾಣದಂತಹ
ವೈರಿಯ ಗೆಲ್ಲಲು
ವೈದ್ಯರು ಪೋಲಿಸರು
ನಿತ್ಯ ಹೋರಾಡುತಿಹರು
ನಾವು ನೀವು ಎಲ್ಲಾ ಧೃತಿಗೆಡದೆ ಬದುಕಬೇಕು
ಬಡವ ಹಸಿವಿನಿಂದ ಇರದಂತೆ ಮಾಡಬೇಕು
ಆಗಲೇಬೇಕು ನಾವು ಆಣಿಮುತ್ತು ದೇಶಕ್ಕೆ
ರೋಗದೀ ಆಗುತಿಹುದು ಸಂಪತ್ತಿನ ಸೋರಿಕೆ
ಜಗವೆಲ್ಲಾ ಭಯದ ಗೂಡು ಪರಮಾಣು ಇದ್ದರು
ಮುಗಿಯಲ್ಲ ಜನರ ಪಾಡು ವೈರಾಣು ಸತ್ತರೂ
ಮನುಜನ ಆಸೆಗಿಲ್ಲ ಇತಿ-ಮಿತಿಯ ಅಂಕುಶ
ಅದಕೇ ತಾನೆ ಇಂಥ ಘನ-ಘೋರ ಸಂಕಟ
ಒಂದೇ ಭೂಮಿ ಒಂದೇ ಬಾನು ಒಂದೇ ಬದುಕು ನಮ್ಮದು
ಒಂದೇ ಭೂಮಿ ಒಂದೇ ಬಾನು ಒಂದೇ ಬದುಕು ನಮ್ಮದು
ಜನಗಣ ವಂದೇ ಮಾತರಂ
ಜೋಡಿಸಿ ಕೈಯನು
ದೇಶದ ಸಂರಕ್ಷಣೆ
ನಮ್ಮ ನಿಮ್ಮ ಹೊಣೆ